ಕಮಲ್ ಹಾಸನ್ ಕನ್ನಡದ ಬಗ್ಗೆ ಮಾತನಾಡಿ ಎಬ್ಬಿಸಿದ ವಿವಾದ ಈಗಷ್ಟೇ ತಣ್ಣಗಾಗಿದೆ. ಅಷ್ಟರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಂದು ವಿವಾದ ಹುಟ್ಟಿಹಾಕಿದ್ದಾರೆ. ಸೌತ್ನ ಬಹಳಷ್ಟು ತಾರೆಯರು ಅಮಿತಾಭ್ ಬಚ್ಚನ್ ಸಿನಿಮಾಗಳ ರಿಮೇಕ್ ಮಾಡಿ ಗೆದ್ದವರು. ಅದ್ರಲ್ಲಿ ರಾಜ್ಕುಮಾರ್ ಒಬ್ರು ಅಂದುಬಿಟ್ಟಿದ್ದಾರೆ. ಕನ್ನಡದ ರಾಜಕುಮಾರನಿಗೆ ರಿಮೇಕ್ ರಾಜ ಅಂದ್ರೆ ಕನ್ನಡಿಗರು ಸುಮನ್ನೆ ಇರ್ತಾರಾ,, ವರ್ಮಾಗೆ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ.